jagathu

Thursday, July 20, 2006

ಅದು ಫ್ರೆಂಡ್ ಶಿಪ್ ಮೇಡಂ
ಬೆಂಗಳೂರು- ಬೆಂಗಳೂರು ಮಹಾನಗರಪಾಲಿಕೆ ಮತ್ತು ಇಸ್ಕಾನ್ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನ ಊಟ ಯೋಜನೆಯ ನವೀಕರಣ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಈ ಯೋಜನೆಯಲ್ಲಿ ಕೆಲವು ಅಭಿವದ್ದಿಯ ಬದಲಾವಣೆ ಮಾಡಲು ಬೆಂಗಳೂರು ಮೇಯರ್ ಮುಸ್ತಾಜ್ ಬೇಗಂ ಸೂಚಿಸಿದರು. ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳೋಂದಿಗೆ ಮಾತನಾಡುತ್ತಾ, ನನ್ನ ಭೇಟಿಯ ಸಂದರ್ಭದಲ್ಲಿ ಕೆಲವು ಮಕ್ಕಳು ಓಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು. ಅದ್ದರಿಂದ ಅವರಿಗೆ ಅಗತ್ಯವಿರುವಷ್ಟು ತಟ್ಟೆಗಳನ್ನು ವಿತರಿಸಲು ಕ್ರಮ ಕೈಗೋಳ್ಳಬೇಕು ಏಂದು ಹೇಳಿದರು.
ತಮಗಾದ ಮುಜುಗರವನ್ನು ತಪ್ಪಿಸುವ ಪ್ರಯತ್ನದಲ್ಲಿ ಆ ಅಧಿಕಾರಿಯು ಅದೋಂದು ತಪ್ಪು ಅಲ್ಲ ಏಂದು ಸಮರ್ಥಿಸಲು ಮುಂದಾದರು. ಅವರು ಮೇಯರ್ ಗೆ ಉತ್ತರಿಸುತ್ತಾ ಅದು ಅವರ ಗೆಳೆತನದ ಲಕ್ಷಣವಾಗಿದೆ ಮೇಡಂ ಏಂದು ಹೇಳಿದರು. ತಟ್ಟೆಗಳ ಕೋರತೆ ಇದೆ ಏಂಬುದನ್ನು ಈ ಮುಲಕ ಮರೆಮಾಚಲು ಇವರು ಮುಂದಾಗಿದ್ದಾರೆ. ಆದರೆ ಇದನ್ನು ಓಪ್ಪಿಕೋಳ್ಳಲು ಮೇಯರ್ ಸಿದ್ಧರಾಗಿಲ್ಲವೆಂತೆ
ತಟ್ಟೆ ವಿತರಿಸಲು ಆದೇಶಿಸಿಯೇ ಬಿಟ್ಟರು.

0 Comments:

Post a Comment

<< Home