jagathu

Tuesday, July 18, 2006


ಕಾಸರಗೋಡಿನ ಯಕ್ಷಗಾನದ ಕಣ್ಮಣಿ ಗೋಪಾಲಕಷ್ಣ ಭಟ್ ಇನ್ನಿಲ್ಲ
ಕಾಸರಗೋಡು- ಯಕ್ಷಗಾನದ ಅಭಿಜಾತ ಕಲಾವಿದ ಶೇಣಿ ಗೋಪಾಲಕಷ್ಣ ಭಟ್ ಇಂದು ಮಂಗಳವಾರ ನಿಧನರಾದರು.ಬಡಗು, ತೆಂಕು ತಿಟ್ಟಿನಲ್ಲಿ ಚಿರಪರಿಚತರು. ಮಾತಿನ ಲೋಕದ ಮಹಾಕವಿ ಏಂಬ ಹೆಗ್ಗಳಿಕೆಗೆ ಪಾತ್ರರಾದ ಇವರಿಗೇ 88 ವರ್ಷ ಪ್ರಾಯವಾಗಿತ್ತು. ಶೇಣಿಯವರು 1918 ಏಪ್ರಿಲ್ 7ರಂದು ಕಾಸರಗೋಡು ಜಿಲ್ಲೆಯ ಬೇಳ ಸಮೀಪದ ಉಬ್ಬಾನದಲ್ಲಿ ಜನಿಸಿದರು. ತಂದೆ ನಾರಾಯಣ ಭಟ್ ಮತ್ತು ತಾಯಿ ಲಕ್ಷ್ಮೀ ಅಮ್ಮ ಏಳೆವೆಯಲ್ಲಿ ತೀರಿಕೋಂಡರು. ಬಾಲ್ಯವನ್ನು ಉಬ್ಬಾನ ಪೆರಡಾಲದ ಕೋಡೈಕೆರೆ, ಕಾರಿಂಜೆ ಮೋದಲಾದಡೆ ಕಳೆದರು. ನಂತರ ್ವರು ಪೆರ್ಲ ಬಳಿಯ ಶೇಣಿ ಏಂಬ ಊರಲ್ಲಿ ವಾಸವಾಗಿದ್ದದು, ಕಾಸರಗೋಡಿನ ಹೆಸರನ್ನು ಇಡೀ ದೇಶಕ್ಕೆ ಯಕ್ಷಗಾನ ಕಲೆಯ ಮೂಲಕ ಪರಿಚಯ ಮಾಡಿದವರಲ್ಲಿ ಇವರು ಓಬ್ಬರು.ಇವರು ಸಣ್ಣದಿಂದಲೇ ಯಕ್ಷಗಾನ ಬಯಲಾಟ, ತಾಳಮದ್ದಳೆಯಲ್ಲಿ, ಹರಿದಾಸರಾಗಿಯೂ ಯಕ್ಷಗಾನ ಧ್ವನಿ ಸುರುಳಿ ಹೆಸರನ್ನುಹಿಂದೆಂದೂ ನೋಡದಂತಹ ಬೇಡಿಕೆಗಳನ್ನು ಗಳಿಸಿಕೋಟ್ಟಿದ್ದರು.ಯಕ್ಷಗಾನ ದಂತಕಥೆಯಾಗಿರುವ ಶೇಣಿ 1990ರಲ್ಲಿ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, 1993ರಲ್ಲಿ ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 1994ರಲ್ಲಿ ಕರ್ನಾಟಕ ಸರಕಾರದ ಜಾನಪದ ಮತ್ತು ಯಕ್ಷಗಾನ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳನ್ನು ಗಳಿಸಿಕೋಂಡಿದ್ದಾರೆ.ಶೇಣಿಯವರ ಚಿಂತನಶೀಲತೆ ಕೇವಲ ಕೇವಲ ತನ್ನ ಪಾತ್ರಗಳಿಷ್ಟೇ ಸೀಮಿತವಲ್ಲ, ನಮ್ಮ ಸಂಸ್ಕತಿ, ಪೌರಾಣಿಕ ಹಿನ್ನೆಲೆ ಮತ್ತು ಜನ ಜೀವನದೋಂದಿಗೂ ಸ್ಪಂದಿಸುತ್ತದೆ. ಕಲಾಕ್ಷೇತ್ರದ ಬದುಕು ವೈವಿದ್ಯಗಳನ್ನು ನಿರೂಪಿಸಿಸುವುದೋರಂದಿಗೆ ತೆಂಕುತಿಟ್ಟಿನ ಯಕ್ಷಗಾನ ಸಮಗ್ರ ವಿವೇಚನೆಯನ್ನು ತಮ್ಮದೇ ರೀತಿಯಲ್ಲಿ ಓದಗಿಸಿದ್ದಾರೆ.ವೇಷಧಾರಿಯ ಗಮನ ಪಾತ್ರಸಷ್ಟಿಯ ಕಡೆಗಿದ್ದು, ಇದು ವೈಚಾರಿಕತೆ ಮತ್ತು ವಿಭಿನ್ನತೆಗಳಿಂದ ಕೂಡಬೇಕು ಏನ್ನುವುದಕ್ಕೆ ಶೇಣಿಯವರು ನಿರ್ದೇಶನ. ಪೌರಾಣಿಕದಂತೆ ಭಾಸವಾಗಿರುವ ಹೋಸ ಪ್ರಸಂಗಗಳಲ್ಲಿ ಹೋಸ ಪಾತ್ರಗಳನ್ನು ಸಷ್ಟಿಸಿ ಇತರರಿಗೆ ಮಾರ್ಗದರ್ಶಿಯಾದರು. ಕುಣಿತ, ವೇಷಗಾರಿಕೆ, ಅಭಿನಯಗಳು ವೈವಿಧ್ಯತೆ ಅಪಾರ. ತಮ್ಮ ಕಡೆಯ ದಿನಗಳಲ್ಲಿ ಸಂತಸದ ಜೀವನ ಅನುಭವಿಸುತ್ತಿರುವ ಶೇಣಿಯವರ ಮನಸ್ಸು ಇನ್ನೂ ಹೇಳಬೇಕಾದ ಹಲವು ವಿಷಯಗಳ ಬಗ್ಗೆ ತುಡಿಯುತ್ತಿತ್ತು. ಆದರ ಇಂದು ಅವರು ನಮ್ಮ ಮುಂದೆ ಇಲ್ಲದ್ದು, ಇಡೀ ಯಕ್ಷಗಾನ ಕಲೆ ಓಂದು ತುಂಬಲಾರದ ನಷ್ಟ ಏಂಬುದುವುದಕ್ಕೆ ಸಂದೇಹವಿಲ್ಲ.

0 Comments:

Post a Comment

<< Home