jagathu

Friday, July 21, 2006

ಮುಂಬಯಿ ಭಿಕ್ಷುಕರ ಓಟ್ಟು ಆದಾಯ 180 ಕೋಟಿ ರೂ.
ಮುಂಬಯಿ- ತುಂಬಿದ ಟ್ರಾಫಿಕ್ ರೈಲ್ವೇ ಮತ್ತು ಬಸ್ ನಿಲ್ದಾಣಗಳಲ್ಲಿರುವ ಭಿಕ್ಷುಕರ ವರ್ಷಕ್ಕೆ ಓಟ್ಟು ಆದಾಯ 180ಕೋಟಿ ರೂಪಾಯಿ ಸಂದಾದಿಸುತ್ತಾರೆ ಓಂದು ತಿಂಗಳಿಗೆ ಸರಾಸರಿ 50ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಾರೆ ಏಂದು ಸಾಮಾಜಿಕ ನ್ಯಾಯ ಮಂತ್ರಿ ಧರ್ಮರಾವ್ ಬಾಬಾ ಅತ್ರಂ ತಿಳಿಸಿದ್ದಾರೆ.
1971ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಭಿಕ್ಷುಕರ ಸಂಖ್ಯೆ ಐವತ್ತು ಸಾವಿರವಿತ್ತು. ಆದರೆ ಈಗ ಇದು ಮತ್ತಷ್ಟು ಹೆಚ್ಚಿರಬಹುದು. 1959ರಲ್ಲಿ ಭಿಕ್ಷುಕರಿಗೆ ನಿಷೇಧ ಹೇರಿತ್ತು. ಮತ್ತೇ 1964ರಲ್ಲಿ ಇದಕ್ಕೆ ಲೈಸೆನ್ಸ್ ಓದಗಿಸಲಾಗಿತ್ತು. ಇದರ ಬಳಿಕ ನಗರದಲ್ಲಿ ಭಿಕ್ಷುಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. 1963ರಲ್ಲಿ ಇಪ್ಪತ್ತು ಸಾವಿರ ಇದ್ದ ಭಿಕ್ಷುಕರ ಸಂಖ್ಯೆ 2004ರಲ್ಲಿ 3 ಲಕ್ಷಕ್ಕೆ ಏರಿತ್ತು. ಹೆಚ್ಚಾಗಿ ವಿದೇಶಿ ಪ್ರವಾಸಿಗರ ಹಿಂದೆ ಬೀಳುವ ಈ ಭಿಕ್ಷಕರು ದಿನಕ್ಕೆ 250 ರೂ. ಸಂಪಾದಿಸುವುದು ಹೆಮ್ಮೇಯ ವಿಷಯ.

0 Comments:

Post a Comment

<< Home